ಈ ಹಣ್ಣು, ತರಕಾರಿಗಳ ಸಿಪ್ಪೆಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ

ಸಾಮಾನ್ಯವಾಗಿ ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆ ತೆಗೆದ ನಂತರ ಅವುಗಳನ್ನು ಬಿಸಾಡುತ್ತೇವೆ. ಆದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?   

Last Updated : Dec 11, 2020, 05:00 PM IST
  • ಕೆಲವು ತರಕಾರಿಗಳು ಮತ್ತು ಹಣ್ಣುಗಳಿಗಿಂತ ಅವುಗಳ ಸಿಪ್ಪೆಗಳು ಆರೋಗ್ಯಕರ
  • ಈರುಳ್ಳಿ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ
  • ಆಪಲ್ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ಎಂಬ ಆಂಟಿ-ಆಕ್ಸಿಡೆಂಟ್ ಇದೆ
ಈ ಹಣ್ಣು, ತರಕಾರಿಗಳ ಸಿಪ್ಪೆಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ title=

ನವದೆಹಲಿ: ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆ ಸುಲಿದ ನಂತರ ಸಾಮಾನ್ಯವಾಗಿ ಅದನ್ನು ಎಸೆಯುತ್ತೇವೆ. ಆದರೆ ನಾವು ಎಸೆಯುವ ಸಿಪ್ಪೆಗಳು ತುಂಬಾ ಪ್ರಯೋಜನಕಾರಿ ಎಂದು ಹಲವರಿಗೆ ತಿಳಿದಿಯೇ ಇರುವುದಿಲ್ಲ. ಕೆಲವು ತರಕಾರಿಗಳು ಮತ್ತು ಹಣ್ಣುಗಳಿಗಿಂತ ಅವುಗಳ ಸಿಪ್ಪೆಗಳು ಆರೋಗ್ಯಕರ. ಅವುಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ತರಕಾರಿ ಮತ್ತು ಹಣ್ಣುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

ಸೌಂದರ್ಯಕ್ಕಾಗಿ ಕಿತ್ತಳೆ ಸಿಪ್ಪೆ:
orange
ಸಿಪ್ಪೆಗಳೊಂದಿಗೆ ಕಿತ್ತಳೆ (Orange) ಹಣ್ಣನ್ನು ತಿನ್ನಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನೀವು ಅದನ್ನು ಸಿಪ್ಪೆ ಸುಲಿದೇ ತಿನ್ನಬೇಕು. ಆದರೆ ಕಿತ್ತಳೆ ಸಿಪ್ಪೆಯನ್ನು ಒಣಗಿಸುವ ಮೂಲಕ ನೀವು ಪುಡಿಯನ್ನು ತಯಾರಿಸಬಹುದು. ಈ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಟ್ಯಾನಿಂಗ್ ತೆಗೆದುಹಾಕುತ್ತದೆ ಮತ್ತು ಮುಖದ ಸೌಂದರ್ಯವನ್ನು ವೃದ್ಧಿಸುತ್ತದೆ.

ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಸೂಪ್:
Make soup of onion peels
ತರಕಾರಿಯಲ್ಲಿ ಈರುಳ್ಳಿಯನ್ನು ಸಿಪ್ಪೆಗಳೊಂದಿಗೆ ತಿನ್ನಲು ಸಾಧ್ಯವಿಲ್ಲ. ಆದರೆ ನೀವು ಖಂಡಿತವಾಗಿಯೂ ಸೂಪ್ಗೆ ಈರುಳ್ಳಿ (Onion) ಸಿಪ್ಪೆಗಳನ್ನು ಸೇರಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಈರುಳ್ಳಿ ಸಿಪ್ಪೆಗಳನ್ನು ತೊಳೆದು ಸೂಪ್‌ನಲ್ಲಿ ಹಾಕಿ ಕುದಿಸಿ. ಆದರೆ ನೀವು ಸೂಪ್ ಕುಡಿಯುವಾಗಲೆಲ್ಲಾ ಈರುಳ್ಳಿ ಸಿಪ್ಪೆಗಳನ್ನು ತೆಗೆಯಿರಿ. ಈರುಳ್ಳಿ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ. ಅವು ಆಂಟಿ-ಆಕ್ಸಿಡೆಂಟ್ ಮತ್ತು ಕ್ವೆರ್ಸೆಟಿನ್ ಅನ್ನು ಹೊಂದಿರುತ್ತವೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬಿಪಿಯನ್ನು ನಿಯಂತ್ರಿಸಲು ಸಹ ಕಾರ್ಯನಿರ್ವಹಿಸುತ್ತದೆ.

ಪೋಷಕಾಂಶ ಭರಿತ ಆಲೂಗಡ್ಡೆ ಸಿಪ್ಪೆ:
Potato
ಹೆಚ್ಚಿನ ಜನರು ಆಲೂಗೆಡ್ಡೆ ಸಿಪ್ಪೆ ತೆಗೆದು ಬಳಸುತ್ತಾರೆ. ಆದರೆ ನಿಮಗೆ ಗೊತ್ತಾ, ಆಲೂಗೆಡ್ಡೆ ಸಿಪ್ಪೆಗಳು ಪೌಷ್ಠಿಕಾಂಶದಿಂದ ತುಂಬಿವೆ? ಅವುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಇದರೊಂದಿಗೆ ಇದು ನಿಮ್ಮ ಚಯಾಪಚಯ ಕ್ರಿಯೆಗೆ ಸಹ ಶಕ್ತಿಯನ್ನು ನೀಡುತ್ತದೆ. ಇದು ಮಾತ್ರವಲ್ಲ ಅವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.

ಆಪಲ್ ಸಿಪ್ಪೆ ಪ್ರಯೋಜನಕಾರಿ:
Apple Peel
ಸಿಪ್ಪೆ ಸಹಿತ ಸೇವಿಸಬಹುದಾದ ಹಣ್ಣುಗಳಲ್ಲಿ ಸೇಬು ಕೂಡ ಒಂದು. ಆದರೆ ಆಪಲ್ ಸಿಪ್ಪೆಗಳನ್ನು ತಿನ್ನದೇ ಇರುವವರೂ ಇದ್ದಾರೆ. ಆಪಲ್ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ಎಂಬ ಆಂಟಿ-ಆಕ್ಸಿಡೆಂಟ್ ಇದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೇಬುಗಳ ಹೊರತಾಗಿ ಇನ್ನೂ ಅನೇಕ ಹಣ್ಣುಗಳಿವೆ. ಅವುಗಳನ್ನು ಸಿಪ್ಪೆ ಸಹಿತ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

Trending News